"ನನ್ನ ಮೇಲೆ ಬೇಕಾದಷ್ಟು ಜನ ಅಪಪ್ರಚಾರ ಮಾಡಿದ್ದಾರೆ. ಇಲ್ಲದ ಹೊಲಸನ್ನೆಲ್ಲ ನನ್ನ ತಲೆಯಮೇಲೆ ಹೇರಿದ್ದಾರೆ. ಅವೆಲ್ಲವನ್ನೂ ಕ್ಷಮಿಸಿ ಮರೆಯುವಷ್ಟು ಔದಾರ್ಯ ನನಗಿದೆ. ಆದರೆ ನನ್ನ ಕನ್ನಡಕ್ಕೆ ಅಪಚಾರ ಮಾಡಿ ಯಾರೂ ನಾನು ಜೀವಂತವಾಗಿರುವವರೆಗೆ ಬದುಕಿ ಉಳಿಯಲಾರದು. ಸಾಯುವವರೆಗೂ ಅವರು ನನ್ನ ಆಜನ್ಮ ವೈರಿಗಳು"